ಶ್ರೀ ರಾಮ ಸಮರ್ಥ
ನಿನ್ನ ಬಂಟನ ಗಂಟ ಕಾಯೋ ನೀ ಬಲವಂತ |
ಒಮ್ಮೆ ಕಳೆದರೆ ಮತ್ತೆ ಸಿಗದೋ ಹನುಮಂತ|| ಪ||
ಸುಲಭವಲ್ಲವೊ ಗಂಟು ಬಿಡಿಸಲಸದಳವು|
ಬಹು ತ್ರಾಸದಿಂದಲಿ ಪಡೆದಿರುವ ಗಂಟು|
ಕ್ಷಣ ಕ್ಷಣವು ಹಾತೊರೆದು ಪಡೆದ ಗಂಟು |
ಇದರೊಳಗೆ ಗುಪ್ತವು ರಾಮನಾಮದ ನಂಟು|| 1||
ಋಷಿಮುನಿಗಳಿಗೂ ಲಭ್ಯವಾಗದ ಗಂಟು |
ಧನಕನಕ ಕೊಟ್ಟು ಕೊಂಡೊಯ್ಯದ ಗಂಟು |
ಬಯಸಿದೆಲ್ಲೆಡೆಯಲ್ಲಿ ಕೈಗೆಟುಕದ ಗಂಟು |
ದಶರಥಾತ್ಮಜನ ಮಹಿಮೆ ಕೂಡಿದ ಗಂಟು ||2||
ನಾನಿರುವೆ ದುರ್ಬಲನು ರಕ್ಷಿಸುವುದು ಎಂತೊ |
ನೀನಿರುವೆ ಬಲವಂತ ನಿನ್ನನಾಶ್ರಯಿಸಿರುವೆ |
ನೀನಲ್ಲದೆ ಕಾವ ಸ್ವಾಮಿ ಯಾರಿಹರು |
ಚೈತನ್ಯದಾಸನ ಕೋರಿಕೆಯ ಮನ್ನಿಸು ||
No comments:
Post a Comment