Saturday, 3 September 2016

ninna bantana gantu by Jairam G.

ಶ್ರೀ ರಾಮ ಸಮರ್ಥ

ನಿನ್ನ ಬಂಟನ ಗಂಟ ಕಾಯೋ ನೀ ಬಲವಂತ |
ಒಮ್ಮೆ ಕಳೆದರೆ ಮತ್ತೆ ಸಿಗದೋ ಹನುಮಂತ|| ಪ||

ಸುಲಭವಲ್ಲವೊ ಗಂಟು ಬಿಡಿಸಲಸದಳವು|
ಬಹು ತ್ರಾಸದಿಂದಲಿ ಪಡೆದಿರುವ ಗಂಟು|
ಕ್ಷಣ ಕ್ಷಣವು ಹಾತೊರೆದು ಪಡೆದ ಗಂಟು |
ಇದರೊಳಗೆ ಗುಪ್ತವು ರಾಮನಾಮದ ನಂಟು|| 1||

ಋಷಿಮುನಿಗಳಿಗೂ ಲಭ್ಯವಾಗದ ಗಂಟು |
ಧನಕನಕ ಕೊಟ್ಟು ಕೊಂಡೊಯ್ಯದ ಗಂಟು |
ಬಯಸಿದೆಲ್ಲೆಡೆಯಲ್ಲಿ ಕೈಗೆಟುಕದ ಗಂಟು |
ದಶರಥಾತ್ಮಜನ ಮಹಿಮೆ ಕೂಡಿದ ಗಂಟು ||2||

ನಾನಿರುವೆ ದುರ್ಬಲನು ರಕ್ಷಿಸುವುದು ಎಂತೊ |
ನೀನಿರುವೆ ಬಲವಂತ ನಿನ್ನನಾಶ್ರಯಿಸಿರುವೆ |
ನೀನಲ್ಲದೆ ಕಾವ ಸ್ವಾಮಿ ಯಾರಿಹರು |
ಚೈತನ್ಯದಾಸನ ಕೋರಿಕೆಯ ಮನ್ನಿಸು ||



Monday, 29 August 2016

ಗಣಪತಿ ಸ್ತುತಿ - ಜಿ.ಜೈರಾಮ್







Enna nee kaayo Hanumantha

                              ಶ್ರೀ
ಎನ್ನ ನೀ ಕಾಯೋ | ಹನುಮಂತ ಎಂದೆಂದೂ ||
ನಿನ್ನ ಚರಣವ ಬಿಡೆನೋ | ಅಭಯ ನೀಡುವ ತನಕ || ||ಪ||
ನೀನಿರುವೆ ಮಹಜ್ಞಾನಿ | ಸಕಲ ಶಾಸ್ತ್ರವ ಬಲ್ಲ |
ಮಧುರ ಭಾಷಿಯು ನೀನು | ಮನವ ತಟ್ಟ ಬಲ್ಲ|
ಸಕಲ ವೇದಗಳಲಿ | ಪಾಂಡಿತ್ಯ ನಿನ್ನದೆ |
ರಾಮನ ಹೃದಯದಲಿ | ನೆಲೆಯಾಗಿ ನೀನಿರುವೆ || 1||
ಸೀತೆಯನು ಶೋಧಿಸಿ | ಲಂಕಾಪುರಿಯ ಸುಟ್ಟೆ |
ಚೂಡಾಮಣಿಯನು ತಂದು | ರಾಮಗರ್ಪಿಸಿದೆ |
ವಾನರ ಸೇನೆಯನು | ಕರುಣದಿ ಕಾಯ್ದೆ |
ಸೇತು ಬಂಧನ ಮಾಡಿ| ರಾಮ ಕೃಪೆಗೊಳಗಾದೆ | ||2||
ನಿನ್ನ ಭಕ್ತರಿಗೆಲ್ಲ | ಯಾವ ದುಗುಡವು ಇಲ್ಲ |
ಭಯಭೀತಿ ಲವಲೇಶ | ಇರಲು ಸಾಧ್ಯವೆ ಇಲ್ಲ |
ನಿನ್ನ ಸಾನಿಧ್ಯದಲಿ |ಎನಗೆ ಆಶ್ರಯ ನೀಡು |
ಎನುತ ಪ್ರಾರ್ಥನೆಗೈವ | ಚೈತನ್ಯ ದಾಸ || ||2||