ಎಂಥ ಭಾಗ್ಯ ಕರುಣಿಸಿದೆ ಶ್ರೀ ರಾಮಚಂದ್ರ
ಎಂಥ ಪ್ರೇಮದಾತ ನೀನು ಕರುಣಾಸಮುದ್ರ ||ಪ||
ಜಗದ ಒಡೆಯ ನೀನು ಇರಲು ಜಗದಗೊಡವೆ ಎನಗೆ ಏಕೆ
ಜಗದದಾತ ನೀನು ಇರಲು ಜಗದ ಚಿಂತೆ ಎನಗೆ ಏಕೆ
ಎನ್ನ ಪೊರೆಯೆ ನೀನು ಇರಲು ಅನ್ಯರೆನೆಗೆ ಏತಕೆ
ನಿನಗೆ ಶರಣು ಬಂದಿರಲು ಪೊರೆವೆ ಎಂಬ ನಂಬಿಕೆ ||೧||
ಅಣುರೇಣು ತೃಣಕಾಷ್ಟದಿ ನಿನ್ನ ಅಂಶ ತುಂಬಿಹುದು
ಸಕಲ ಜೀವರಾಶಿಯಲಿ ನಿನ್ನ ಬಿಂಬ ಮೂಡಿಹುದು
ನಿನ್ನ ನಾಮ ಜಗದೊಳಗೆ ಸರ್ವವ್ಯಾಪಿಯಾಗಿಹುದು
ನಿನ್ನ ನಡೆಯೆ ಆದರ್ಶ ಲೋಕವೆಲ್ಲ ಪಾಲಿಸಿಹುದು ||೨||
ನಿತ್ಯ ನಿನ್ನ ನೋಡುವಂತ ಭಾಗ್ಯ ಎನಗೆ ನೀಡಿಹೆ
ನಿತ್ಯ ನಿನ್ನ ಸ್ಮರಣೆಮಾಡೊ ಬುದ್ಧಿ ಎನಗೆ ಕರುಣಿಸಿಹೆ
ನಿನ್ನ ಸನ್ನಿಧಾನದಲ್ಲಿ ಅಮೃತವನು ಉಣಿಸುವೆ
ಚೈತನ್ಯದಾಸನ ದೋಷವನ್ನು ಇಲ್ಲದಂತೆ ಮಾಡುವೆ||೩||

No comments:
Post a Comment