Saturday, 13 December 2008

ಚಿಂತಾಮಣಿ ಮಂದಿರದಲ್ಲಿ ಶ್ರೀ ಬ್ರಹ್ಮಚೈತನ್ಯರ ಆರಾಧನೆ

ಆರಾಧನೆ ಸಮಾರಾಧನೆ
ಬ್ರಹ್ಮಚೈತನ್ಲ್ಯರ ಆರಾಧನೆ //ಪ//

ಮಾರುತಿ ಅವತಾರಿ ಗುರು ಬ್ರಹ್ಮಚೈತನ್ಯ
ಸಮರ್ಥಾವತಾರಿ ಗೋಂದಾವಳೇಕರ
ಕುಲಕರ್ಣಿ ವಂಶೋಧ್ಭವ ಗೋಸಂರಕ್ಷಕ
ತುಕಾಮಾಯಿ ಶಿಷ್ಯ ಜಗದೋದ್ಧಾರ //೧//

ನಡೆವುದು ಸಪ್ಥಾಹ ನಿತ್ಯವಿನೂತನ
ನಡೆವುದು ಭಜನೆ ಅವ್ಯಾಹತವು
ಹೋಮ ಹವನಗಳು ಜಪಾನುಷ್ಟಾನವು
ಭಕ್ತಿ ಶ್ರದ್ಧೆಯಿಂ ಪೂಜಾಕೈಂಕರ್ಯವು //೨//

ಸಂಗೀತ ಸಾಹಿತ್ಯ ಸೌರಭ ಎಲ್ಲೆಲ್ಲೂ
ನಾಮದ ಘೋಷ ಎಲ್ಲರ ಬಾಯಲ್ಲೂ
ಸಂಭ್ರಮ ಸಂತೋಷ ಮನೆಮನೆಯಲ್ಲೂ
ಅಮಿತಾನಂದವು ಮನಮನದಲ್ಲೂ //೩//

ಭಕ್ತರಸಂಗವು ದೊರಕುವುದಿಲ್ಲಿ
ಮುಕುತಿಮಾರ್ಗವು ಕಾಣುವಿದಿಲ್ಲಿ
ಗುರುವಿನ ಅನುಗ್ರಹ ದೊರಕುವುದಿಲ್ಲಿ
ಅನ್ನದಾನಂಗಳು ನಡೆವುದು ಇಲ್ಲಿ //೩//

ಕೂಡುವ ಬನ್ನಿರಿ ಸೇವಿಪಬನ್ನಿರಿ
ಚೈತನ್ಯರಚರಣ ಭಜಿಸಲು ಬನ್ನಿರಿ
ಚೈತನ್ಯದಾಸನೊಡೆ ಕುಣಿಯಲು ಬನ್ನಿರಿ
ಪರಮಾನಂದವ ಹೊಂದಲು ಬನ್ನಿರಿ //೪//

--ಜಿ. ಜಯರಾಮ್.

No comments: